Saturday, December 22, 2007

ಸುರಿಯುವ ಸೋನೆ


ಮೊನ್ನೆ ಮೊನ್ನೆಯೂ ಸಹ ಬೆಂಗಳೂರಿನಲ್ಲಿ ಸೋನೆಯಂತೆ ಸುರಿದ ಮಳೆ, ಅನೇಕರಿಗೆ ಕಿರಿಕಿರಿ ಉಂಟುಮಾಡಿತು. ಇತ್ತೀಚಿನ ಮಳೆಯೇ ಹಾಗೇ ಮನುಷ್ಯರಿಗೆ ಕಿರಿಕಿರಿ ಮಾಡಲೆಂದೇ ಧರೆಗಿಳಿಯುತ್ತಿದೆಯೋನೋ ಎಂಬಂತಹ ಭಾವನೆಗಳನ್ನು, ಮನಸ್ಸಿನಲ್ಲಿ ಬಿತ್ತುವಂತಹ ಅನೇಕ ಅವಘಡಗಳು ಆಗಿಂದಾಗ್ಗೆ ಸಂಭವಿಸುತ್ತಲೇ ಇವೆ. ಇದಕ್ಕೆಲ್ಲ ಕಾರಣವಾದರೂ ಏನೂ? ಎಂಬುದನ್ನು ಗಂಭೀರವಾಗಿ ಆಲೋಚಿಸುವಂತಹ ಪ್ರಯತ್ನಗಳನ್ನು ಯಾರಾದರೂ ಮಾಡುತ್ತಿದ್ದಾರೆಯೇ? ವಿಜ್ಞಾನಿಗಳೇನೋ ಮಾಡುತ್ತಲೇ ಇದ್ದಾರೆ ಆದರೆ ಅಂತಹ ಆಲೋಚನೆಗಳು ಸಂಶೋಧನೆಗಳು ಪ್ರಶಸ್ತಿಯನ್ನೋ, ಪದವಿಯನ್ನೋ ಪಡೆಯಲಷ್ಟೇ ಸೀಮಿತವಾಗಿವೆಯೇ ಹೊರತು ಪ್ರಕೃತಿ ಸಂಭಂದಿತವಾದ ವರದಿಗಳಾಗಲೀ, ಸಂಶೋಧನೆಗಳಾಗಲಿ ಜನಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವಲ್ಲಿ ಸೋತಿವೆ.

ಬಹಳ ಹಿಂದೆ ಅನ್ನುವುದಕ್ಕಿಂತಲೂ ಹತ್ತಾರು ವರುಷಗಳ ಕೆಳಗೂ ಸಹ ಜನ ಮಳೆಯನ್ನ ಆನಂದಿಸುತ್ತಿದ್ದರು, ಆಹ್ವಾನಿಸುತ್ತಿದ್ದರು. ಈಗ ಮಳೆ ಎಂದರೆ ಹೆದರುವಂತಹ ಪರಿಸ್ಥಿತಿ ನಿಮಾಱಣವಾಗಿದೆ. ಈ ಅವಾಂತರಗಳಿಗೆಲ್ಲ ಕಾರಣವೂ ಸಹ ನಾವೇ. ಹತ್ತಾರು ವಷಱಗಳಿಂದ ನಾವು ಮಾಡಿದ ಪರಿಸರ ಮಾಲಿನ್ಯ, ಅರಣ್ಯ ಹನನ, ಯೋಜಿತವಲ್ಲದಂತಹ ನಿಮಾಱನ ಹೀಗೆ ಈ ಎಲ್ಲ ಅವಾಂತರಗಳು ಈಗ ಮತ್ತಷ್ಟು ಅನಾಹುತಗಳಿಗೆ ಕಾರಣವಾಗಿವೆ. ಈ ಅನಾಹುತಗಳು ಕಹಿ ನೆನಪುಗಳಾಗಿ ಮಾತ್ರ ಉಳಿಯದೇ ಪರಿಸರ ಪ್ರಜ್ಞೆಯ ಪಾಠಗಳಾಗುವುದೇ?.